Dhoni biography in kannada trees
MS Dhoni: ವಿಶ್ವಕಪ್ ಕಂಡ ಶ್ರೇಷ್ಠ ನಾಯಕ ಕ್ಯಾಪ್ಟನ್ ಕೂಲ್ ಧೋನಿ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ
ಕನ್ನಡ ಸುದ್ದಿ / ಫೋಟೊ ಗ್ಯಾಲರಿ / ಕ್ರೀಡೆ / Ownership papers Dhoni: ವಿಶ್ವಕಪ್ ಕಂಡ ಶ್ರೇಷ್ಠ ನಾಯಕ ಕ್ಯಾಪ್ಟನ್ ಕೂಲ್ ಧೋನಿ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ
MS Dhoni: ಭಾರತ ಮಾತ್ರವಲ್ಲದೇ ಇಡೀ ವಿಶ್ವ ಕ್ರಿಕೆಟ್ ಕಂಡತಂಹ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ.
ಕ್ಯಾಪ್ಟನ್ ಕೂಲ್ ಎಂದೇ ಹೆಸರಾಗಿರುವ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಫಿನೀಶರ್ ಸಹ ಹೌದು.
01
ಭಾರತ ಮಾತ್ರವಲ್ಲದೇ ಇಡೀ ವಿಶ್ವ ಕ್ರಿಕೆಟ್ ಕಂಡತಂಹ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ. ಕ್ಯಾಪ್ಟನ್ ಕೂಲ್ ಎಂದೇ ಹೆಸರಾಗಿರುವ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಫಿನೀಶರ್ ಸಹ ಹೌದು. ಇನ್ನು, ಭಾರತದ ಮಾಜಿ ನಾಯಕ ಧೋನಿ 7 ಜುಲೈ 1981 ರಂದು ರಾಂಚಿಯಲ್ಲಿ ಜನಿಸಿದರು.
02
ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅವರು ನಿವೃತ್ತಿ ಪಡೆದಿದ್ದರೂ ಸಹ ಭಾರತ ತಂಡಕ್ಕೆ ಅವರ ಕೊಡುಗೆ ಅಪಾರ.
ಸದ್ಯ ಐಪಿಎಲ್ 17ನೇ ಸೀಸನ್ ಮುಗಿಸಿರುವ ಎಂಎಸ್ ಧೋನಿ ಕುಟುಂಬದೊಂದಿಗೆ ಹಾಯಾಗಿ ಪ್ರವಾಸ ಮಾಡುತ್ತಿದ್ದಾರೆ. ಅಲ್ಲದೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೊಷಿಸಿದರೂ ಸಹ ಈವರೆಗೂ ಐಪಿಎಲ್ ಆಡುತ್ತಿಕರುವ ಧೋನಿ ಈ ವರ್ಷದ ಐಪಿಎಲ್ ಬಳಿಕ ನಿವೃತ್ತಿ ನೀಡುತ್ತಾರೆ ಎನ್ನಲಾಗುತ್ತಿತ್ತು.
03
ಆದರೆ ಧೋನಿ ಮಾತ್ರ ಇದನ್ನು ಸ್ಪಷ್ಟಪಡಿಸಿದೇ ಆರಾಮವಾಗಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಇನ್ನು, ಧೋನಿ ವಿಶ್ವ ಕ್ರಿಕೆಟ್‌ನಲ್ಲಿ ಐಸಿಸಿ ಎಲ್ಲಾ ಟ್ರೋಫಿಗಳನ್ನೂ ಗೆದ್ದು ನಾಯಕ ಎಂಬ ದಾಖಲೆ ಹೊಂದಿದ್ದಾರೆ. ಧೋನಿ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ.
04
ಅಲ್ಲದೇ ಧೋನಿ ನಂತರ ಭಾರತದ ಪರ ಯಾರೂ ಸಹ ಈವರೆಗೆ ಐಸಿಸಿ ಟ್ರೋಫಿ ಗೆದ್ದಿಲ್ಲ. ಇನ್ನೂ, 2007ನೇ ಇಸವಿಯಲ್ಲಿ ಎಂ ಎಸ್ ಧೋನಿ ಅವರನ್ನು ನಾಯಕರನ್ನಾಗಿ ನೇಮಕ ಮಾಡುವಂತೆ ಸಚಿನ್ ತೆಂಡೂಲ್ಕರ್ ಶಿಫಾರಸು ಮಾಡಿದ್ದರು.
ಕಪಿಲ್ ದೇವ್ ಬಳಿಕ ಭಾರತೀಯ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನಂಟ್ ಕರ್ನಲ್ ಹುದ್ದೆ ಟೀಂ ಇಂಡಿಯಾದ ಎರಡನೇ ಕ್ರಿಕೆಟಿಗನಾಗಿದ್ದಾರೆ.
05
ಧೋನಿ ಅವರಿಗೆ 2011 ನವೆಂಬರ್ 1ರಂದು ಧೋನಿಗೆ ಈ ಪದವಿ ನೀಡಿ ಗೌರವಿಸಲಾಗಿತ್ತು. ಇನ್ನು, ಬಾಂಗ್ಲಾದೇಶ ಪ್ರವಾಸದ ಸಮಯದಲ್ಲಿ 23 ಡಿಸೆಂಬರ್ 2004 ರಂದು ಬಾಂಗ್ಲಾದೇಶದ ವಿರುದ್ಧ ಧೋನಿ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಿದರು.
ಚೊಚ್ಚಲ ಏಕದಿನ ಪಂದ್ಯದಲ್ಲಿ ಧೋನಿ ನಿರಾಸೆ ಮೂಡಿಸಿದ್ದರು.
06
ಎಂಎಸ್ ಧೋನಿ 1070 ಕೋಟಿಗೂ ಹೆಚ್ಚಿನ ಒಡೆಯ. ಧೋನಿ ಅವರ ಮಾಸಿಕ ಆದಾಯ 4 ಕೋಟಿಗಿಂತ ಹೆಚ್ಚಿದ್ದರೆ ಒಂದು ವರ್ಷದಲ್ಲಿ ಅವರು 50 ಕೋಟಿಗೂ ಹೆಚ್ಚು ಗಳಿಸುತ್ತಾರೆ. ಧೋನಿ ಅವರ ಒಂದು ಸೀಸನ್ ಐಪಿಎಲ್ ಸಂಭಾವನೆ 12 ಕೋಟಿ. ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರಬಹುದು ಆದರೆ ಅವರು ಇನ್ನೂ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ.
07
ಮಹೇಂದ್ರ ಸಿಂಗ್ ಧೋನಿ ತಮ್ಮ 39ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದ ಮೂಲಕ 15 ಆಗಸ್ಟ್ 2020 ರಂದು ತಮ್ಮ ನಿವೃತ್ತಿಯನ್ನು ಘೋಷಿಸಿದರು. ಧೋನಿ ರಾಂಚಿಯಲ್ಲಿ ನೆಲೆಸಿದ್ದಾರೆ. ರಾಂಚಿಯಲ್ಲಿ ಧೋನಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಮುಂಬೈನಲ್ಲೂ ಧೋನಿ ಬಂಗಲೆ ಹೊಂದಿದ್ದಾರೆ.
08
ಧೋನಿ ಬೈಕ್ ಎಂದರೆ ಸಖತ್ ಕ್ರೇಜ್ ಹೊಂದಿದ್ದಾರೆ. ಅವರ ಬಳಿ ವಿಶ್ವದ ಐಷಾರಾಮಿ ಕಾರುಗಳಿವೆ. ಅದರಲ್ಲಿ ಹಮ್ಮರ್, ಪೋರ್ಷೆ 911, ಆಡಿ, ಮರ್ಸಿಡಿಸ್, ಮಿತ್ಸುಬಿಷಿ ಪಜೆರೊ, ರೇಂಜ್ ರೋವರ್ ಮತ್ತು ಇನ್ನೂ ಅನೇಕ ವಾಹನಗಳು ಅವರ ಗ್ಯಾರೇಜ್ ಅನ್ನು ಅಲಂಕರಿಸುತ್ತಿವೆ.
ಇದಷ್ಟೇ ಅಲ್ಲ, ಹಾರ್ಲೆ ಡೇವಿಡ್‌ಸನ್ ಫ್ಯಾಟ್ ಬಾಯ್, ಕವಾಸಕಿ ನಿಂಜಾ ಹೆಚ್2 ಮತ್ತು ಕಾನ್ಫೆಡರೇಟ್ ಹೆಲ್‌ಕ್ಯಾಟ್ ಎಕ್ಸ್32 ಬೈಕ್‌ಗಳನ್ನು ಹೊಂದಿದ್ದಾರೆ.
- FIRST PUBLISHED :
08
MS Dhoni: ವಿಶ್ವಕಪ್ ಕಂಡ ಶ್ರೇಷ್ಠ ನಾಯಕ ಕ್ಯಾಪ್ಟನ್ ಕೂಲ್ ಧೋನಿ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ
ಭಾರತ ಮಾತ್ರವಲ್ಲದೇ ಇಡೀ ವಿಶ್ವ ಕ್ರಿಕೆಟ್ ಕಂಡತಂಹ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ.
ಕ್ಯಾಪ್ಟನ್ ಕೂಲ್ ಎಂದೇ ಹೆಸರಾಗಿರುವ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಫಿನೀಶರ್ ಸಹ ಹೌದು. ಇನ್ನು, ಭಾರತದ ಮಾಜಿ ನಾಯಕ ಧೋನಿ 7 ಜುಲೈ 1981 ರಂದು ರಾಂಚಿಯಲ್ಲಿ ಜನಿಸಿದರು.
MORE
GALLERIES